ಮನೆಯ ಮುಂದೆ ಈ ಗಿಡ ಕಂಡರೆ ಖಂಡಿತವಾಗಿ ತಂದು ಉಪಯೋಗಿಸಿ. ಅದು ಯಾವುದು ಗೊತ್ತೇ????

ಉಪಯುಕ್ತ ಮಾಹಿತಿ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಮ್ಮ ಆಯುರ್ವೇದ ಪದ್ಧತಿಯಲ್ಲಿ ಬಹಳ ವರ್ಷಗಳ ಹಿಂದೆಯೇ ಸಸ್ಯ ಗಿಡಮೂಲಿಕೆಗಳ ಉಪಯೋಗ ಮಹಾ ಋಷಿ ಮುನಿಗಳು ಮಾಡುತ್ತಲೇ ಬಂದಿದ್ದಾರೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಅಂಥಹ ಗಿಡಮೂಲಿಕೆಗಳು ಬೇವಿನ ಮರ ಕೂಡ ಒಂದು. ಇದರ ಪ್ರತಿಯೊಂದು ಭಾಗವಾದ ಗಿಡ ಎಲೆ ಕಾಂಡ ಹೂವು ಹಣ್ಣು ಕಾಯಿ ಬೇರು ನಾಟಿ ಆಯುರ್ವೇದ ಪದ್ಧತಿಯಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ. ಈ ಬೇವಿನ ಮರದ ಪ್ರತಿಯೊಂದು ಭಾಗವನ್ನು ಜೊತೆಗೆ ಈ ಗಿಡದ ಎಣ್ಣೆಯೂ ಕೂಡ ಔಷಧ ರೂಪದಲ್ಲಿ ನಮಗೆ ಲಾಭವನ್ನು ಒದಗಿಸಿ ಕೊಡುತ್ತದೆ. ಬೇವಿನ ಮರ ಎಲ್ಲ ಮರಕ್ಕಿಂತಲೂ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ ಅಂತ ಹೇಳಬಹುದು. ಹಾಗೆಯೇ ಇದರಲ್ಲಿ 150ಕ್ಕೂ ಹೆಚ್ಚು ರೋಗ ರುಜಿನಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಅಂತ ಹೇಳಿದರೆ ತಪ್ಪಾಗಲಾರದು. ಹಾಗೆಯೇ ಇದು ಸಂಶೋಧನೆಯ ಪ್ರಕಾರ ಸಾಬೀತು ಪಡಿಸಿದ್ದಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬೇವಿನ ಮರದ ಆರೋಗ್ಯಕರ ಲಾಭಗಳ ಬಗ್ಗೆ ಪರಿಚಯ ಮಾಡಿ ಕೊಡುತ್ತೇವೆ.

 

ಬೇವಿನ ಮರ ಅಂದ ಕೂಡಲೇ ನಮಗೆ ಯುಗಾದಿ ಹಬ್ಬವೂ ನೆನಪಿಗೆ ಬರುತ್ತದೆ. ಬೇವಿ ರುಚಿಯಲ್ಲಿ ಕಹಿ ಗುಣವನ್ನೂ ಹೊಂದಿದ್ದರು ಇದರ ಲಾಭಗಳು ಬಹಳಷ್ಟು ರುಚಿಯನ್ನು ನೀಡುತ್ತವೆ. ಹಾಗೆಯೇ ಈ ಮರವು ನಮ್ಮ ಸುತ್ತ ಮುತ್ತಲಿನ ಪರಿಸರವೂ ಶುದ್ದವಾಗಿರುತ್ತದೆ. ಇದರ ಜೊತೆಗೆ ವಾಯುವಿನಿಂದ ಹರಡುವ ಕೆಲವು ವೈರಾಣಿಗಳನ್ನು ತಡೆಹಿಡಿಯುತ್ತವೆ ಅಂತೆ. ಈ ಬೇವಿನ ಎಲೆಗಳು ಮುಖ್ಯವಾಗಿ ಚರ್ಮವ್ಯಾಧಿ ಸಮಸ್ಯೆಗೆ ದಿವ್ಯ ಔಷಧ ಅಂತ ಹೇಳಬಹುದು. ಹಾಗೂ ಇದು ತುರಿಕೆಗೆ ರಾಮಬಾಣ ಇದ್ದಂತೆ ಎಂದು ವೈದ್ಯರು ಹೇಳುತ್ತಾರೆ. ಬೇವಿನ ಎಲೆಗಳನ್ನು ಚೆನ್ನಾಗಿ ಅರೆದು ತುರಿಕೆ ಇರುವ ಜಾಗದಲ್ಲಿ ಹಚ್ಚಬೇಕು. ಇದನ್ನು ಹಚ್ಚಿದ ನಂತ್ರ ಒಂದು ಗಂಟೆ ಹಾಗೆಯೇ ಬಿಡಬೇಕು. ತುರಿಕೆ ಕಡಿಮೆ ಆಗುತ್ತದೆ. ಹಾಗೂ ಒಂದು ಗಂಟೆ ನಂತರ ತಣ್ಣೀರಿನಿಂದ ತೊಳೆಯಬೇಕು. ಬೇವಿನ ಎಲೆಗಳನ್ನು ಸೇವನೆ ಮಾಡುವುದರಿಂದ ನಮ್ಮ ಲಿವರ್ ಕಾರ್ಯ ಚಟುವಟಿಕೆಗಳು ಚೆನ್ನಾಗಿ ಆಗುತ್ತದೆ ಹಾಗೂ ಅದರ ಕಾರ್ಯ ಕ್ಷಮತೆ ಕೂಡ ಅಭಿವೃದ್ದಿ ಆಗುತ್ತದೆ. ಅಷ್ಟೇ ಜೀರ್ಣ ಕ್ರಿಯೆ ಹಾಗೂ ಶ್ವಾಸಕೋಶದ ಸೋಂಕುಗಳಿಂದ ರಕ್ಷಣೆಯನ್ನು ಮಾಡುತ್ತದೆ.

 

ಇನ್ನೂ ನಿಮ್ಮ ಕಣ್ಣುಗಳಿಗೆ ತೊಂದರೆಗಳು ಉದಾಹರಣೆಗೆ ಕಣ್ಣು ಉರಿ ಕಣ್ಣುಗಳಿಂದ ನೀರು ಬರುವುದು ಕಣ್ಣು ಕೆಂಪಗೆ ಆಗುವುದು ಎಲ್ಲವನ್ನು ಕ್ರಮೇಣ ನಿವಾರಣೆ ಮಾಡುತ್ತದೆ ಈ ಬೇವು. ಅಷ್ಟೇ ಅಲ್ಲದೇ ಕಣ್ಣಿನ ದೃಷ್ಟಿ ಅನ್ನು ಕೂಡ ಸುಧಾರಿಸುತ್ತದೆ. ಇನ್ನೂ ಮೊಡವೆಗಳಿಗೆ ಹೇಳಿ ಮಾಡಿಸಿದ ಸೂಪರ್ ದಿವ್ಯ ಔಷಧವಾಗಿದೆ. ಮೊಡವೆಗಳಿಂದ ನೀವು ಬೇಸತ್ತು ಹೋಗಿದ್ದರೆ ಬೇವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿ ನೀರಿನಲ್ಲಿ ಕಲಸಿ ನಿಮ್ಮ ಮುಖಕ್ಕೆ ಲೇಪಿಸಿ ಕೊಳ್ಳಿ. ಪೂರ್ತಿ ರಾತ್ರಿ ಬಿಟ್ಟು ಮರುದಿನ ಬೆಳಿಗ್ಗೆ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮೊಡವೆಗಳನ್ನು ಕುಗ್ಗಿಸುತ್ತದೆ ಜೊತೆಗೆ ಕಲೆಗಳು ಕಣ್ಮರೆ ಆಗುವಂತೆ ಮಾಡುತ್ತದೆ.ಇನ್ನೂ ಬೇವಿನ ಮೆದುವಾದ ಕಾಂಡದಿಂದ ನಿಮ್ಮ ಹಲ್ಲುಗಳನ್ನು ಉಜ್ಜಿದರೆ ನಿಮ್ಮ ಬಾಯಿಯ ದುರ್ವಾಸನೆ ದೂರ ಆಗುತ್ತದೆ ಜೊತೆಗೆ ನಿಮ್ಮ ಹಲ್ಲುಗಳು ಬಲಗೊಳ್ಳುತ್ತವೆ. ಗಟ್ಟಿ ಮುಟ್ಟಾಗುತ್ತವೆ. ಹಾಗೆಯೇ ಹಲ್ಲುಗಳು ಹುಳುಕು ಬೀಳದಂತೆ ತಡೆಯುತ್ತದೆ. ಹಾಗೆಯೇ ರಕ್ತದಲ್ಲಿ ಸೇರಿಕೊಂಡಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತವೆ ಮತ್ತು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಸೊಳ್ಳೆಗಳನ್ನು ಹೋಗಲಾಡಿಸಲು ಕಹಿಬೇವಿನ ಹೊಗೆಯನ್ನು ಆಡಿಸಿದರೆ ಸೊಳ್ಳೆಗಳು ಹತ್ತಿರ ಕೂಡ ಬರುವುದಿಲ್ಲ.

Leave a Reply

Your email address will not be published. Required fields are marked *