ಬಂಜೆತನಕ್ಕೆ ಹಲವಾರು ಕಾರಣಗಳಿವೆ ಮಹಿಳೆಯರಲ್ಲಿ ಹಾರ್ಮೋನ್ ಇಂಬಾಲೆನ್ಸ್ ಆಗುವುದರಿಂದ ಮಕ್ಕಳು ಆಗುವ ಚಾನ್ಸ್ ಕಡಿಮೆ. ಸ್ಟ್ರೆಸ್ ನಿಂದಲೂ ಮಕ್ಕಳಾಗುವ ಚಾನ್ಸ್ ಕಡಿಮೆ. ಅತಿಯಾದ ತೂಕ, ಪೀರಿಯಡ್ ಸಮಸ್ಯೆ, ನಿದ್ರೆಯ ಸಮಸ್ಯೆ ಇದ್ದರೂ ಮಕ್ಕಳಾಗುವ ಚಾನ್ಸ್ ಕಡಿಮೆ. ಥೈರಾಯಿಡ್ ಸಮಸ್ಯೆ ಇದ್ದವರು, ಸ್ಮೋಕ್ ಮತ್ತು ಡ್ರಿಂಕ್ ಅಭ್ಯಾಸ ಇದ್ದವರಿಗೂ ಮಕ್ಕಳಾಗುವ ಸಾಧ್ಯತೆ ಕಡಿಮೆ. ಅತಿಯಾದ ಕಾಫಿ ಕುಡಿಯುವುದರಿಂದ, ಹೆಚ್ಚು ಏಜ್ ಆದರೂ ಮಕ್ಕಳಾಗುವುದಿಲ್ಲ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಆಗಲೂ ಸಮಸ್ಯೆ ನಿವಾರಣೆ ಆಗದೇ ಇದ್ದರೆ ಮನೆ ಮದ್ದನ್ನು ಮಾಡಬಹುದು.
ಆಲದ ಮರದ ತೊಗಟೆ ಇದು ಆಯುರ್ವೇದ ಶಾಪ್ ನಲ್ಲಿ ಸಿಗುತ್ತದೆ. ಮೊದಲು ಇದನ್ನು ಕ್ಲೀನ್ ಮಾಡಿಕೊಳ್ಳಬೇಕು ನಂತರ ಮೇಲಿನ ಒಂದು ಲೇಯರ್ ತೆಗೆದು ಒಂದು ಗಂಟೆ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ಪೌಡರ್ ಮಾಡಿಕೊಳ್ಳಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಸ್ಪೂನ್ ಪೌಡರನ್ನು ಉಗುರುಬೆಚ್ಚಗಿನ ಹಾಲಿನಲ್ಲಿ ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು. ಮೂರು ಸ್ಪೂನ್ ಕಪ್ಪು ಎಳ್ಳಿಗೆ, ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಪ್ರತಿದಿನ ತಿನ್ನಬೇಕು. ಶತಾವರಿ ಚೂರ್ಣ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ಒಂದು ಸ್ಪೂನ್ ಶತಾವರಿ ಪೌಡರ್ ಅನ್ನು ಒಂದು ಗ್ಲಾಸ್ ಹಾಲಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುಂಚೆ ಕುಡಿಯಬೇಕು.
1 ಸ್ಪೂನ್ ಆಲೋವೆರಾ ಜಲ್ ಗೆ 1 ಸ್ಪೂನ್ ಜೇನುತುಪ್ಪ ಸೇರಿಸಿ ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡುವ 1 ಗಂಟೆ ಮೊದಲು ತಿನ್ನಬೇಕು. ಒಂದು ಸ್ಪೂನ್ ಅಶ್ವಗಂಧ ಪೌಡರ್ ಅನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ಹಾಲಿಗೆ ಹಾಕಿ ಮಿಕ್ಸ್ ಮಾಡಿ ಪ್ರತಿದಿನ ಎರಡು ಸಲ ಸೇವಿಸಬೇಕು. ಬೇಕಾದರೆ ಒಂದು ಸ್ಪೂನ್ ಜೇನುತುಪ್ಪ ಸೇರಿಸಿಕೊಳ್ಳಬಹುದು. 10 ಗ್ರಾಂ ಹಿಪ್ಪಲಿ ಪೌಡರ್,10 ಗ್ರಾಂ ಒಣ ಶುಂಠಿ ಪೌಡರ್,10 ಗ್ರಾಂ ಕರಿಮೆಣಸಿನ ಪೌಡರ್,10 ಗ್ರಾಂ ಕೇಸರಿ ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಸ್ಪೂನ್ ಪೌಡರ್ ನ್ನು ಒಂದು ಸ್ಪೂನ್ ಶುದ್ಧ ತುಪ್ಪಕ್ಕೆ ಸೇರಿಸಿ ಊಟದ ಅರ್ಧ ಗಂಟೆ ಮೊದಲು ಅಥವಾ ಊಟದ ಅರ್ಧ ಗಂಟೆ ನಂತರ ಸೇವಿಸಬೇಕು.
ಹರಳೆಣ್ಣೆ ಪ್ಯಾಕ್ ಮಾಡುವುದರಿಂದ ಗರ್ಭಾಶಯದ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಬೌಲ್ ನಲ್ಲಿ ಉಣ್ಣೆ ಬಟ್ಟೆಯನ್ನು ಹಾಕಿ ಅದರ ಮೇಲೆ ಹರಳೆಣ್ಣೆಯನ್ನು ಹಾಕಬೇಕು ನಂತರ ನೆನೆದ ಉಣ್ಣೆ ಬಟ್ಟೆಯನ್ನು ಮಲಗಿಕೊಂಡು ಹೊಟ್ಟೆಯ ಮೇಲೆ ಹಾಕಿ ಅದರ ಮೇಲೆ ಪ್ಲಾಸ್ಟಿಕ್ ಕವರ್ ಹಾಕಬೇಕು ಅದರ ಮೇಲೆ ಒಂದು ಟವೆಲ್ ಹಾಕಿ ಅದರ ಮೇಲೆ ಹೀಟಿನ ಪ್ಯಾಡ್ ಅಥವಾ ಬಿಸಿ ನೀರಿನ ಬಾಟಲ್ ಇಡಬೇಕು ಹೀಗೆ ಪ್ರತಿದಿನ ಒಂದು ಗಂಟೆ 2-3 ತಿಂಗಳು ಮಾಡಬೇಕು ಹೀಗೆ ಮಾಡುವುದರಿಂದ ಗರ್ಭಾಶಯದ ಸಮಸ್ಯೆ ಹಾಗೂ ಪೀರಿಯಡ್ ಪ್ರಾಬ್ಲಮ್ ಪರಿಹಾರವಾಗುತ್ತದೆ.
ಪ್ರತಿದಿನ ಒಂದು ಸ್ಪೂನ್ ಅಗಸೆ ಬೀಜದ ಪೌಡರ್ ಸೇವಿಸುವುದರಿಂದ ಗರ್ಭಾಶಯದ ಸಮಸ್ಯೆ ದೂರವಾಗುತ್ತದೆ. ಈ ಮೇಲಿನ ಯಾವುದೇ ಮನೆ ಮದ್ದನ್ನು ಪೀರಿಯಡ್ ಸಮಯದಲ್ಲಿ, ಹಾಲು ಕುಡಿಯುವ ಮಕ್ಕಳಿದ್ದರೆ ತೆಗೆದುಕೊಳ್ಳಬಾರದು ಹಾಗೂ ಯಾವುದೇ ಮನೆ ಮದ್ದನ್ನು 3-4 ತಿಂಗಳು ಮಾಡಬೇಕು ಆಗ ರಿಸಲ್ಟ್ ತಿಳಿಯುತ್ತದೆ. ಒಳ್ಳೆಯ ಆಹಾರವನ್ನು ತೆಗೆದುಕೊಳ್ಳಬೇಕು ಡ್ರೈಫ್ರೂಟ್ಸ್, ಹಣ್ಣುಗಳು, ತರಕಾರಿ, ಫಿಶ್, ಹಾಲು ಹಾಲಿನ ಉತ್ಪನ್ನ, ಎಗ್ಗ್ ಪ್ರತಿದಿನ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಬಂಜೆತನ ಸಮಸ್ಯೆ ದೂರವಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.