ಹೊಟ್ಟೆ ಉಬ್ಬರ ಮತ್ತು ನೋವಿದ್ದರೆ ಬೆಂಕಿಯಲ್ಲಿ ಬದನೆಕಾಯಿಯನ್ನು ಸುಟ್ಟು , ಸಿಪ್ಪೆ ತೆಗೆದು ಪೇಸ್ಟ್ ಮಾಡಿ. ಅದಕ್ಕೆ ಸೈಂಧವ ಉಪ್ಪು ಮತ್ತು ಇಂಗು ಸೇರಿಸಿ ಸೇವಿಸಿದರೆ ಗ್ಯಾಸ್ ಕಡಿಮೆಯಾಗಿ ಹೊಟ್ಟೆ ಉಬ್ಬರ ಮತ್ತು ನೋವು ಶಮನವಾಗುತ್ತದೆ.
ಬೇಯಿಸಿದ ಬದನೆಕಾಯಿಯನ್ನು ಜೇನುತುಪ್ಪದ ಜತೆ ಕಲಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ನಿದ್ದೆ ಚೆನ್ನಾಗಿ ಬರುತ್ತದೆ. ಬದನೆಕಾಯಿ ಮತ್ತು ಪಾಲಾಕ್ ಸೊಪ್ಪನ್ನು ನಿಯಮಿತವಾಗಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
ಒಂದು ಬದನೆಕಾಯಿ, ಅರ್ಧ ಸೌತೆಕಾಯಿ ಮತ್ತು ಕಾಲು ಕಪ್ ಹುಳಿ ಮಜ್ಜಿಗೆ ಸೇರಿಸಿ ಪೇಸ್ಟ್ ಮಾಡಿ ಹೇರ್ ಪ್ಯಾಕ್ ಮಾಡಿದರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ. ಮೂತ್ರ ಪಿಂಡದಲ್ಲಿ ಕಲ್ಲಿದ್ದರೆ ಪ್ರತಿ ದಿನ ಬದನೆಕಾಯಿ ಬೇಯಿಸಿ ಬೀಜಗಳನ್ನು ತೆಗೆದು ಸೇವಿಸಿದರೆ ಮೂತ್ರ ಸಲೀಸಾಗಿ ಹೋಗುತ್ತದೆ ಮತ್ತು ಕಲ್ಲು ಕರಗುತ್ತದೆ.
ಬದನೆಕಾಯಿ, ಟೊಮೆಟೊ, ಉಪ್ಪು ಮತ್ತು ಕರಿಮೆಣಸು ಸೇರಿಸಿ ಸೂಪ್ ಮಾಡಿ ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ. ಬದನೆಕಾಯಿಯನ್ನು ಬೇಯಿಸಿ ಕುರುಗಳ ಮೇಲೆ ಕಟ್ಟಿದರೆ ಕುರು ಒಡೆದು, ನೋವು, ಉರಿ ಎಲ್ಲಾ ಕಡಿಮೆಯಾಗುತ್ತದೆ.
ಬದನೆಕಾಯಿ ರಸವನ್ನು ಅಂಗೈ ಮತ್ತು ಅಂಗಾಲಿಗೆ ಹಚ್ಚಿದರೆ ಅಂಗೈಅಂಗಾಲು ಬೆವರುವುದು ಕಡಿಮೆಯಾಗುತ್ತದೆ. ಮೂತ್ರ ಮಾಡುವಾಗ ನೋವಿದ್ದರೆ, ಬದನೆಕಾಯಿ ಗಿಡದ ಎಲೆಗಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ಸೇವಿಸಿದರೆ ನೋವು ನಿವಾರಣೆಯಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.