ಎಷ್ಟೇ ನೋವು ಕಷ್ಟವಿದ್ದರೂ ಕಣ್ಣು ತುಂಬಾ ನಿದ್ದೆ ಮಾಡಬೇಕು ಅಂದ್ರೆ ಹೀಗೆ ಮಾಡಿ ನೋಡಿ

ಆರೋಗ್ಯ

ನಮಸ್ತೇ, ಪ್ರಿಯ ಸ್ನೇಹಿತರೆ, ಸುಖಕರವಾದ ಜೀವನ ನಿಮ್ಮದಾಗಬೇಕಾದರೆ ಆರೋಗ್ಯಕರ ನಿದ್ದೆ ನಿಮ್ಮದಾಗಿರಬೇಕು. ನಿದ್ರೆಯ ವಿಷಯಕ್ಕೆ ಬಂದಾಗ, ಕೆಲವರು ಹೆಚ್ಚು ನಿದ್ರೆ ಮಾಡುವ ಅಭ್ಯಾಸ ಹೊಂದಿದ್ದರೆ, ಇನ್ನು ಕೆಲವರಿಗೆ ನಿದ್ರೆಯೇ ಬರುವುದಿಲ್ಲ. ಇನ್ನೂ ನಾವು ದಣಿದು ಕೆಲಸದಿಂದ ಮನೆಗೆ ಬಂದಾಗ ನಮಗೆ ನೆನಪಿಗೆ ಬರುವುದು ನಿದ್ರೆ. ಯಾವಾಗ ಮಲಗುತ್ತೇನೆ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಇರುತ್ತೇವೆ. ನಿಮಗೆ ಗೊತ್ತೇ? ಗೆಳೆಯರೇ ನಿದ್ರೆಗೆ ಜಾರಿದ ಮೇಲೆ ನಮ್ಮ ದೇಹದ ಪ್ರತಿಯೊಂದು ಅಂಗಗಳ ಕೆಲಸಗಳು ನಿಧಾನವಾಗಿ ಕೆಲಸವನ್ನು ಮಾಡುತ್ತದೆ ಎಂದು. ಹೌದು ಇದು ನಿಜವಾದ ಮಾತು. ಮನುಷ್ಯನಿಗೆ ನಿದ್ರೆ ಅನ್ನುವುದು ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವ ವ್ಯಕ್ತಿಯೂ ಕೆಲಸವನ್ನು ಮಾಡಿ ದಣಿದು ಸುಸ್ತು ಆಗಿ ರಾತ್ರಿ ಹೊತ್ತು ಹೊಟ್ಟೆ ತುಂಬಾ ಊಟವನ್ನು ಮಾಡಿ ಮಲಗಿದ ತಕ್ಷಣವೇ ನಿದ್ದೆಗೆ ಜಾರುತ್ತಾನೆ ಅವನೇ ನಿಜವಾದ ಸುಖಿ ಮನುಷ್ಯ ಅಂತ ಹೇಳಬಹುದು. ಆದರೆ ಇಂದಿನ ದಿನಗಳಲ್ಲಿ ಅತಿಯಾದ ಒತ್ತಡದಿಂದಾಗಿ ಕೆಲವರಿಗೆ ಸರಿಯಾಗಿ ನಿದ್ರೆ ಕೂಡ ಬರುವುದಿಲ್ಲ. ನಿದ್ರೆಯು ಸರಿಯಾಗಿ ಇಲ್ಲದೆ ಇದ್ದರೆ ಅದು ನಾನಾ ರೀತಿಯ ರೋಗಗಳಿಗೆ ಕಾರಣವಾಗಬಹುದು. ಇಂದಿನ ಯುವ ಪೀಳಿಗೆಗಯಲ್ಲಿ ಕಾಡುವ ಸಾಮಾನ್ಯವಾದ ಸಮಸ್ಯೆ ಆಗಿದೆ ಈ ನಿದ್ರಾ ಹೀನತೆ.

ಹೌದು ಇದನ್ನು ನಾವು ಹೆಚ್ಚಾಗಿ ಹದಿ ಹರೆಯದ ಮತ್ತು ಯೌವನ ಹೊಂದಿರುವ ಯುವ ಜನತೆ ಯಲ್ಲಿ ಅಧಿಕವಾಗಿ ಗಮನಿಸಬಹುದು. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಹನುಮನ ಬಾಲದಂತೆ ಉದ್ದವಾಗಿ ಸಿಗುತ್ತದೆ. ಆದರೆ ಇಂದಿನ ಲೇಖನದಲ್ಲಿ ನಾವು ತಿಳಿಸುವ ಈ ಆಹಾರವನ್ನು ತಿಂದರೆ ಸಾಕು. ನೀವು ಬೇಗನೆ ನಿದ್ರೆಗೆ ಜಾರುತ್ತೀರಿ. ಹಾಗೂ ನಿದ್ರಾ ಹೀನತೆ ಸಮಸ್ಯೆ ಕಾಡುವುದಿಲ್ಲ. ಅವುಗಳನ್ನು ಒಮ್ಮೆ ಟ್ರೈ ಮಾಡಿರಿ. ಮೊದಲಿಗೆ ಬಾದಾಮಿ. ಹೌದು ಬಾದಾಮಿ ಪೌಷ್ಟಿಕಾಂಶಗಳ ಖನಿಜ ಅಂತ ಹೇಳಬಹುದು. ದಿನಕ್ಕೆ ಐದಾರು ಬಾದಾಮಿ ಸೇವನೆ ಮಾಡುವುದರಿಂದ ನಿದ್ರೆ ಬರುತ್ತದೆ. ಇನ್ನೂ ಎರಡನೆಯದು ಅನ್ನ. ಹೌದು ರಾತ್ರಿ ಹೊತ್ತು ನೀವು ರೊಟ್ಟಿಯ ಬದಲಾಗಿ ಅನ್ನವನ್ನು ಸೇವನೆ ಮಾಡಬೇಕು. ಇದರಲ್ಲಿ ಇರುವ ಗ್ಲೂಕೋಸ್ ಅಂಶವು ನಿಮ್ಮನ್ನು ನಿದ್ರೆಗೆ ಬೇಗನೆ ಜಾರುವಂತೆ ಮಾಡುತ್ತದೆ.

ಉತ್ತಮವಾದ ಆರೋಗ್ಯವಾದ ನಿದ್ರೆಗೆ ಬಾಸುಮತಿ ಅಕ್ಕಿ ತುಂಬಾನೇ ಒಳ್ಳೆಯದು ಅಂತ ಸಂಶೋಧನೆ ಇಂದ ಸಾಬೀತಾಗಿದೆ. ಇನ್ನೂ ಕುಂಬಳಕಾಯಿ ಬೀಜಗಳು. ಇದರಲ್ಲಿ ಯತೇಚ್ಛಬಾಗಿ ಮ್ಯಾಗ್ನಿಷಿಯಂ ಜಿಂಕ್ ಇರುವುದರಿಂದ ಮನಶ್ಶಾಂತಿ ಮನಸ್ಸಿಗೆ ಸಮಾಧಾನ ನಿರಾಳತೆ ಶಾಂತತೆ ನೀಡುತ್ತದೆ ಜೊತೆಗೆ ಸುಖವಾದ ನಿದ್ರೆ ಬರುವ ಹಾಗೆ ಮಾಡುತ್ತದೆ. ಇನ್ನೂ ಬಾಳೆಹಣ್ಣು. ಇದರಲ್ಲಿ ಇರುವ ಅಂಶಗಳು ಅಂದರೆ ಪೊಟ್ಯಾಶಿಯಂ ಮ್ಯಾಗ್ನಿಷಿಯಮ್ ಮತ್ತು ಸಕ್ಕರೆಯ ಅಂಶವು ನಿದ್ರೆಯನ್ನು ತರಿಸುತ್ತದೆ. ಇನ್ನೂ ಡೈರಿ ಉತ್ಪನ್ನಗಳು. ಹಾಲಿನ ಯಾವುದೇ ಸಿಹಿ ತಿಂಡಿ ಗಳು ನೀವು ಸೇವನೆ ಮಾಡಿದರೆ ನಿಮಗೆ ಖಂಡಿತವಾಗಿ ಉತ್ತಮವಾದ ನಿದ್ದೆ ಬರುತ್ತದೆ. ಜೇನುತುಪ್ಪವು ಮೆದುಳಿನಲ್ಲಿ ಮೆಲಟೊನಿನ್ ಅಂಶವನ್ನು ಬಿಡುಗಡೆ ಮಾಡುವುದು ಮತ್ತು ನರಗಳಿಗೆ ಆರಾಮ ನೀಡಿ, ದೇಹದಲ್ಲಿ ಒರೆಕ್ಸಿನ್ ಮಟ್ಟ ಕಡಿಮೆ ಮಾಡಿ, ನಿದ್ರೆಗೆ ಸಹಕರಿಸುವುದು.ಓಟ್ಸ್ ನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು, ಅಮಿನೋ ಆಮ್ಲವು ಇದ್ದು, ಇದು ಕೇವಲ ಉಪಾಹಾರಕ್ಕೆ ಮಾತ್ರವಲ್ಲದೆ, ರಾತ್ರಿ ಮಲಗುವ ಮೊದಲು ಇದನ್ನು ಸೇವನೆ ಮಾಡಬಹುದು.

Leave a Reply

Your email address will not be published. Required fields are marked *