ಸೋಮವಾರ ದಿನ ಹುಟ್ಟಿದವರ ಗುಣ ಸ್ವಭಾವಗಳು. ನೀವು ಈ ದಿನ ಹುಟ್ಟಿದ್ದರೆ ನಿಮ್ಮ ಸ್ವಭಾವ ತಿಳಿಯಿರಿ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಮಿತ್ರರೇ, ಹುಟ್ಟು ಅನ್ನುವುದು ದೇವರು ಕೊಟ್ಟ ಒಂದು ಅದ್ಭುತವಾದ ವರ ಅಂತ ಹೇಳಬಹುದು. ಈ ಜಗತ್ತಿನಲ್ಲಿ ಪ್ರತಿ ಸೆಕೆಂಡ್ ಗೆ 150 ಮಕ್ಕಳು ಹುಟ್ಟುತ್ತವೆ ಅಂತ ತಿಳಿದು ಬಂದಿದೆ. ದಿನಕ್ಕೆ ಲೆಕ್ಕವಿಲ್ಲದಷ್ಟು ಮಕ್ಕಳು ಜನ್ಮ ತಾಳುತ್ತವೆ. ಹಾಗಾದರೆ ಬನ್ನಿ ಇಂದಿನ ನಾವು ನಿಮಗೆ ಸೋಮವಾರ ದಿನ ಹುಟ್ಟಿದವರ ಗುಣ ಲಕ್ಷಣಗಳು ಹೇಗೆ ಇರುತ್ತವೆ ಅಂತ ತಿಳಿಸಿ ಕೊಡುತ್ತೇವೆ. ಸೋಮವಾರ ಹುಟ್ಟಿದವರ ಲಕ್ಕಿ ನಂಬರ್ ಎರಡು ಆಗಿರುತ್ತದೆ. ನಿಮ್ಮ ಲಕ್ಕಿ ದಿನಗಳು ಯಾವುವು ಅಂದರೆ ಸೋಮವಾರ ಶುಕ್ರವಾರ ಮತ್ತು ಭಾನುವಾರ ಆಗಿರುತ್ತದೆ. ನಿಮ್ಮ ಈ ದಿನದಂದು ಹುಟ್ಟಿದವರ ಫೇವರೆಟ್ ಬಣ್ಣ ಬಿಳಿ ಬಣ್ಣ ಆಗಿರುತ್ತದೆ. ಇನ್ನೂ ಇವರ ಗುಣ ಸ್ವಭಾವದ ಬಗ್ಗೆ ಹೇಳುವುದಾದರೆ ಇವರು ಮನಸ್ಸಿನಿಂದ ತುಂಬಾನೇ ಸ್ಟ್ರಾಂಗ್ ಆಗಿರುತ್ತಾರೆ. ಜೀವನದಲ್ಲಿ ಏನೇ ಆಗಲಿ ಏನೇ ಬರಲಿ ಅದನ್ನು ಎದುರಿಸುವ ಛಲವನ್ನೂ ಹೊಂದಿರುವ ವ್ಯಕ್ತಿಗಳಾಗಿದ್ದು ಸದಾ ಕಾಲ ಹಸ್ಮುಖಿ ಆಗಿರುತ್ತಾರೆ.

ಜೊತೆಗೆ ಇವರು ತುಂಬಾನೇ ಬುದ್ದಿ ಶೀಲ ವ್ಯಕ್ತಿಗಳು. ಕ್ರಿಯಾತ್ಮಕ ಜೀವಿಗಳು. ಇವರಲ್ಲಿ ವಿಭಿನ್ನವಾದ ಆಲೋಚನೆಗಳು ಸೃಜನಾತ್ಮಕ ಚಿಂತನೆಗಳನ್ನು ಹೆಚ್ಚಾಗಿ ಒಳಗೊಂಡಿರುತ್ತಾರೆ. ಇವರ ಈ ಗುಣಗಳೇ ಇವರನ್ನು ಉನ್ನತ ಮಟ್ಟಕ್ಕೆ ತಲುಪುವಂತೆ ಮಾಡುತ್ತದೆ. ಮುಂದೆ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರ ಹೊಮ್ಮುತ್ತಾರೆ. ಇನ್ನೂ ದೈಹಿಕ ವಿಚಾರಕ್ಕೆ ಬಂದರೆ ಇವರು ನೋಡಲು ಕುಳ್ಳಗೆ ಇರುತ್ತಾರೆ. ಹಾಗೂ ಇವರ ಕಣ್ಣುಗಳು ತುಂಬಾನೇ ದೊಡ್ಡದಾದ ಆಕಾರದಲ್ಲಿ ಇರುತ್ತದೆ. ಇನ್ನೂ ಇವರು ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಹಾಗೂ 19 ಮತ್ತು 27 ನೇ ವಯಸ್ಸಿನಲ್ಲಿ ಚಿಕ್ಕ ಚಿಕ್ಕ ತೊಂದರೆಗಳಿಗೆ ಒಳಗಾಗುತ್ತಾರೆ.
ಆದರೆ ಇವುಗಳಿಗೆ ಇವರು ಹೆದರದೆ ಅವುಗಳನ್ನು ಎದುರಿಸುತ್ತಾರೆ. ಇನ್ನೂ ಸೋಮವಾರ ಹುಟ್ಟಿದ ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಗೌರವವನ್ನು ನೀಡುತ್ತಾರೆ. ಮಹಿಳೆಯರ ಜೊತೆಗೆ ಮಾತನಾಡುವಾಗ ತುಂಬಾನೇ ರೆಸ್ಪೆಕ್ಟ್ ನೀಡುವ ವ್ಯಕ್ತಿಗಳು ಆಗಿರುತ್ತಾರೆ.

ಇನ್ನೂ ಇವರ ಉದ್ಯೋಗದ ವಿಷಯದ ಬಗ್ಗೆ ಹೇಳುವುದಾದರೆ ಇವರಿಗೆ ಬಿಳಿ ಬಣ್ಣ ಬಹಳ ಅದೃಷ್ಟವನ್ನು ತಂದು ಕೊಡುತ್ತದೆ. ಹೀಗಾಗಿ ನೀವು ದೊಡ್ಡ ದೊಡ್ಡ ಇಂಟರ್ವ್ಯೂ ಗೆ ಹೋಗುವಾಗ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಹೋದರೆ ಖಂಡಿತವಾಗಿ ಯಶಸ್ಸು ದೊರೆಯುತ್ತದೆ. ಕೆಲಸದಲ್ಲಿ ಬೇಗನೆ ಯಶಸ್ಸು ನಿಮ್ಮದಾಗುತ್ತದೆ. ಸೋಮವಾರ ದಿನ ಹುಟ್ಟಿದವರು ತುಂಬಾನೇ ಬುದ್ದಿ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಆಗಿರುತ್ತಾರೆ. ಹೀಗಾಗಿ ಇವರ ಈ ಟ್ಯಾಲೆಂಟ್ ನಿಂದಾಗಿ ಇನ್ನಿತರ ಮಾರ್ಗಸೂಚಿಯನ್ನು ಪಡೆದರೆ ಖಂಡಿತವಾಗಿ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಇವರು ಸ್ವಲ್ಪ ಪರಿಶ್ರಮ ಪಟ್ಟರು ಕೂಡ ಇವರಿಗೆ ದೊಡ್ಡದಾದ ಯಶಸ್ಸು ದೊರೆಯುತ್ತದೆ ಇನ್ನೂ ಇವರ ಪ್ರೀತಿ ಜೀವನ ಹಾಗೂ ಮದುವೆ ಜೀವನ ಹೇಗೆ ಇರುತ್ತದೆ ಅಂತ ಹೇಳುವುದಾದರೆ, ಸೋಮವಾರ ದಿನ ಹುಟ್ಟಿದವರು ತಮ್ಮ ಪ್ರೀತಿ ಪಾತ್ರರನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾನೇ ಯೋಚನೆ ಮಾಡಿ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಅಷ್ಟೇ ಅಲ್ಲದೇ ಇವರಿಗೆ ಲವ್ ಮ್ಯಾರೇಜ್ ಆಗಲು ತುಂಬಾನೇ ಆಸೆ ಇರುತ್ತದೆ. ಒಮ್ಮೆ ಇವರು ಪ್ರೀತಿಯಲ್ಲಿ ಬಿದ್ದರೆ ತಾವು ಪ್ರೀತಿ ಮಾಡುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ. ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೊಳ್ಳುತ್ತಾರೆ. ಇನ್ನೂ ಇವರ ಸಾಂಸಾರಿಕ ಜೀವನದಲ್ಲಿ ಇವರಿಂದ ಯಾವುದೇ ತೊಂದರೆಗಳು ಬರುವುದಿಲ್ಲ. ಆದರೆ ಇವರ ಗಂಡನಿಂದ ಕಿರಿಕಿರಿ ಹಾಗೂ ಮಾನಸಿಕ ಒತ್ತಡ ಮನಸ್ತಾಪಗಳು ಬರಬಹುದು. ಇದರ ಬಗ್ಗೆ ನೀವು ಸ್ವಲ್ಪ ಕಾಳಜಿಯನ್ನು ವಹಿಸಿದರೆ ನಿಮ್ಮ ಸಾಂಸಾರಿಕ ಜೀವನ ಸುಖಮಯ ಆಗುತ್ತದೆ.

Leave a Reply

Your email address will not be published. Required fields are marked *