ನೀವು ಬಾಯಿಯಿಂದ ಉಸಿರಾಟ ನಡೆಸುತ್ತೀರಾ?? ನಿಮ್ಮ ಪ್ರಾಣಕ್ಕೆ ನೀವೇ ದಾರಿ ಮಾಡಿ ಕೊಟ್ಟಂತೆ?? ತಪ್ಪಿಯೂ ಹೀಗೆ ಮಾಡಬೇಡಿ!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಮ್ಮ ಉಸಿರಾಟದ ಪ್ರಕ್ರಿಯೆ ನಮ್ಮ ಮೂಗಿನಿಂದ ಆಗುತ್ತದೆ ಎಂದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಇಡೀ ಜೀವ ಸಂಕುಲದಲ್ಲಿ ವಾಸಿಸುವ ಎಲ್ಲ ಪ್ರಾಣಿಗಳು ಪಕ್ಷಿಗಳು ಉಸಿರಾಡುವುದು ಮೂಗಿನ ಸಹಾಯದಿಂದ. ನಿಮಗೂ ಕೂಡ ಈ ಅನುಭವ ಆಗಿರಬಹುದು. ನೆಗಡಿ ಆದಾಗ ನಮಗೆ ಮೂಗಿನ ಮೂಲಕ ಉಸಿರಾಡಲು ಬಲು ಕಷ್ಟವಾಗುತ್ತದೆ. ಆದರೆ ನಾವು ಮೂಗಿನಿಂದ ಪ್ರತಿ ಬಾರಿ ಉಸಿರಾಡಿದರೆ ಖಂಡಿತವಾಗಿ ನಮ್ಮ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಬಾಯಿಯಿಂದ ಉಸಿರಾಟ ನಡೆಸುವುದು ಹಾನಿ. ಇದು ಕೂಡ ಅನಾರೋಗ್ಯದ ಸಮಸ್ಯೆಯಲ್ಲಿ ಕೂಡ ಒಂದು ಅಂತ ಹೇಳಬಹುದು. ನಮಗೆ ಮೂಗಿನ ಮೂಲಕ ಉಸಿರಾಡಲು ಕಷ್ಟವಾದಾಗ ನಾವು ಬಾಯಿಯ ಮೂಲಕ ಉಸಿರಾಡುತ್ತೇವೆ. ವೈದ್ಯರು ಹೇಳುವ ಪ್ರಕಾರ ಮೂಗಿನ ಮೂಲಕ ಉಸಿರಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದೇ ಬಾಯಿಯಿಂದ ಉಸಿರಾಡಿದರೆ ನಮ್ಮ ದೇಹಕ್ಕೆ ಅಗತ್ಯವಾದ ಆಮ್ಲಜನಕ ಪೂರೈಕೆ ಆಗುವುದಿಲ್ಲ. ಇದರಿಂದ ರಕ್ತದಲ್ಲಿ ಅಮ್ಲಜನಕದ ಕೊರತೆ ಹೆಚ್ಚುತ್ತದೆ.

 

ಹೀಗಾಗಿ ಬಾಯಿಯ ಮೂಲಕ ಉಸಿರಾಟ ನಡೆಸುವುದು ಬಹಳ ಡೇಂಜರ್ ಎಂದು ವೈದ್ಯರು ತಿಳಿಸಿದ್ದಾರೆ. ಬಾಯಿಯ ಮೂಲಕ ಉಸಿರಾಟ ನಡೆಸಿದರೆ ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದ ಸಮಸ್ಯೆಗಳು ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬಾಯಿಯಿಂದ ಉಸಿರಾಟ ನಡೆಸಿದರೆ ಯಾವೆಲ್ಲ ಸಮಸ್ಯೆಗಳು ಶುರು ಆಗುತ್ತವೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ.
ಬಾಯಿಯ ಮೂಲಕ ಉಸಿರಾಟ ರಕ್ತದಲ್ಲಿ ಆಮ್ಲಜನಕ ಕೊರತೆಯನ್ನು ಹೆಚ್ಚಿಸುತ್ತದೆ. ನಿದ್ರೆಯ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆ. ಅಲಸ್ಯತನಕ್ಕೆ ಕಾರಣವಾಗುತ್ತದೆ. ಯಾವುದೇ ಕೆಲಸವನ್ನು ಮಾಡಲು ಮನಸ್ಸು ಆಗುವುದಿಲ್ಲ. ನಿದ್ದೆ ಕೂಡ ಬರುವುದಿಲ್ಲ. ಒಟ್ಟಾರೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಮೂಗಿನ ಮೂಲಕ ಉಸಿರಾಟ ಯಾಕೆ ತಡೆಯುತ್ತದೆ ಅಂತ ಕಾರಣವನ್ನು ತಿಳಿಯುವುದಾದರೆ, ಅಲರ್ಜಿ ಇಂದ ಮೂಗು ಸೋರುವಿಕೆ ಉಸಿರು ಸಾಗುವ ದಾರಿಯಲ್ಲಿ ಅಡೇನಾಯಡಿ ಗ್ರಂಥಿಗಳು ತಿರುಚಿದ ಮೂಗಿನ ಹೊಳ್ಳೆಗಳು ಮೂಗಿನ ಸಂಯುಕ್ತಗಳು ಕಾರಣವಾಗುತ್ತವೆ. ವೈದ್ಯರು ಇದನ್ನು ಸುಲಭವಾಗಿ ಪತ್ತೆ ಹಚ್ಚುತ್ತಾರೆ.

 

ಇವುಗಳನ್ನು ನೀವು ನಿವಾರಣೆ ಮಾಡಿಕೊಂಡರೆ ಖಂಡಿತವಾಗಿ ಉಸಿರಾಟದ ಸಮಸ್ಯೆಗಳು ಕೂಡ ಹತ್ತಿರ ಬರುವುದಿಲ್ಲ. ಆದರೆ ಕೆಲವೊಂದು ನಿವಾರಣೆ ಮಾಡಿಕೊಂಡ ನಂತರವೂ ವ್ಯಕ್ತಿ ಹಾಗೆಯೇ ಬಾಯಿಯಿಂದ ಉಸಿರಾಟ ಮಾಡುತ್ತಾರೆ ಅಂದರೆ ಅದು ಅವರ ಅಭ್ಯಾಸ ಅಥವ ರೂಢಿ ಆಗಿರುತ್ತದೆ. ಈ ಸಮಸ್ಯೆ ನಿಮಗೆ ಹಾಗೆಯೇ ಮುಂದುವರೆದರೆ ದಯವಿಟ್ಟು ವೈದ್ಯರ ಸಲಹೆಯನ್ನು ಪಡೆಯುವುದು ಬಹಳ ಸೂಕ್ತವಾದದ್ದು. ಉಬ್ಬಿದ ಟಾನಸಿಲ್ಗಳು ಮತ್ತು ಮೂಗಿನ ಸಂಯುಕ್ತಗಳನ್ನು ತೆಗೆದು ಹಾಕಲು ಶಸ್ತ್ರ ಚಿಕಿತ್ಸೆ ಬಹಳ ಅವಶ್ಯಕ.ಕೆಲವು ಸಂದರ್ಭದಲ್ಲಿ ನೆಗಡಿ ಆದಾಗ ಅನಿವಾರ್ಯವಾಗಿ ಬಾಯಿಯ ಮೂಲಕ ಉಸಿರಾಟ ನಡೆಸಬೇಕಾದ ಅನಿವಾರ್ಯತೆ ಬರುತ್ತದೆ. ಕೇಲವರಿಗೆ ಧೂಳು ಅಲರ್ಜಿ ಇಂದ ಪುಷ್ಪಪರಾಗದಿಂದ ಅಲರ್ಜಿ ಉಂಟಾಗುತ್ತದೆ. ಅದಕ್ಕಾಗಿ ಇಂತಹ ಅಲರ್ಜಿ ಆಗುವ ವಸ್ತುಗಳಿಂದ ಆದಷ್ಟು ದೂರವಿರವುದು ಒಳ್ಳೆಯದು. ಇದರಿಂದ ಬಾಯಿಯ ಮೂಲಕ ಉಸಿರಾಟ ನಡೆಸುವುದು ತಪ್ಪುತ್ತದೆ.ಇನ್ನೊಂದು ಉಪಾಯ ಏನೆಂದರೆ ಸಲೈನ್ ದ್ರಾವಣವನ್ನು ಹಚ್ಚಿ ಕೂಡ ಮೂಗನ್ನು ಶುದ್ಧಗೊಳಿಸುವುದು ಕೂಡ ಒಂದು ಉತ್ತಮವಾದ ಉಪಾಯವಾಗಿದೆ. ಶುಭದಿನ.

Leave a Reply

Your email address will not be published. Required fields are marked *