30 ಕೋಟಿ ಮೌಲ್ಯದ ಹೆಲಿಕಾಪ್ಟರ್ ಖರೀದಿ ಮಾಡಿದ ರೈತ..!

Hit

ಛಲ ಬಿಡದೇ ರೈತ ಮನಸ್ಸು ಮಾಡಿದರೆ ದೊಡ್ಡ ದೊಡ್ಡ ರಾಜಕಾರಣಿಗಳು , ಸಿನಿಮಾ ನಟರಂತೆ ಸಾಕಷ್ಟು ಹಣ ಸಂಪಾದನೆ ಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟು ಈಗ 30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ ಮಹಾರಾಷ್ಟ್ರದ ರೈತನೊಬ್ಬನ ಕಥೆ ಸ್ಟೋರಿ ಇಲ್ಲಿದೆ ನೋಡಿ.

ಮಹಾರಾಷ್ಟ್ರದ ಭಿವಂಡಿಯ ಜನಾರ್ಧನ್ ಬೋಯಿರ್ ಎಂಬುವವರೇ ಹೆಲಿಕಾಪ್ಟರ್ ಖರೀದಿಸಿರುವ ರೈತ. ಇವರು ಹೆಲಿಕಾಪ್ಟರ್ ಖರೀದಿಸಿ ಈಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇವರು ಕೃಷಿಯ ಜೊತೆಗೆ ಹಲವು ವ್ಯವಹಾರಗಳನ್ನು ನಡೆಸುತ್ತಾರೆ. ಇವರು ಇತ್ತೀಚೆಗೆ ಡೈರಿ ಉದ್ಯಮಕ್ಕೆ ಪ್ರವೇಶಿಸಿದ್ದಾರೆ. ಈ ಹೊಸ ಉದ್ಯಮದಿಂದಾಗಿ ಜನಾರ್ಧನ್ ಬೋಯಿರ್ ಭಾರತದ ವಿವಿಧ ಊರುಗಳಿಗೆ ಪ್ರಯಾಣಿಸಬೇಕಾಗಿದೆ. ಅವರು ತಮ್ಮ ಡೈರಿ ವ್ಯವಹಾರದ ಸಲುವಾಗಿ ದೇಶಾದ್ಯಂತ ಪ್ರಯಾಣಿಸಬೇಕಾಗಿದೆ. ಇದಕ್ಕಾಗಿಯೇ ಈ ಹಿನ್ನೆಲೆಯಲ್ಲಿ ಜನಾರ್ಧನ್ ಬೋಯಿರ್ ಅವರು ರೂ.30 ಕೋಟಿ ಬೆಲೆಯ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಡೈರಿ ಉದ್ಯಮದ ಕಾರಣಕ್ಕೆ ತಾವು ಪಂಜಾಬ್ ಹರಿಯಾಣ ರಾಜಸ್ಥಾನ ಗುಜರಾತ್‌ ರಾಜ್ಯಗಳಿಗೆ ಆಗಾಗ ಪ್ರಯಾಣಿಸಬೇಕಾಗುತ್ತದೆ ಮತ್ತು ಕೃಷಿಯ ಜೊತೆಗೆ ತನ್ನ ಡೈರಿ ವ್ಯವಹಾರವನ್ನೂ ತಾನು ನೋಡಿಕೊಳ್ಳಬೇಕು ಎಂದು ಜನಾರ್ಧನ್ ಬೋಯಿರ್ ಹೇಳಿದ್ದಾರೆ.

ಇನ್ನು ಹಲವು ಊರುಗಳಲ್ಲಿ ವಿಮಾನ ನಿಲ್ದಾಣಗಳು ಇಲ್ಲದೇ ಇರುವುದರಿಂದ ಹೆಚ್ಚು ಸಮಯ ಪ್ರಯಾಣಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಜನಾರ್ಧನ್ ಬೋಯಿರ್ ಹೆಲಿಕಾಪ್ಟರ್ ಖರೀದಿಸಲು ನಿರ್ಧರಿಸಿದರು. ಈ ಬಗ್ಗೆ ಅವರ ಸ್ನೇಹಿತರೊಬ್ಬರು ಅವರಿಗೆ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ. ಕಳೆದ ಭಾನುವಾರ ಈ ಹೆಲಿಕಾಪ್ಟರ್ ಅನ್ನು ಜನಾರ್ಧನ್ ಬೋಯಿರ್’ರವರ ಗ್ರಾಮಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಜನಾರ್ಧನ್ ಬೋಯಿರ್ ಆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಅವಕಾಶವನ್ನು ತಮ್ಮ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡಿದ್ದಾರೆ. ಜನಾರ್ಧನ್ ಬೋಯಿರ್ ಅವರು 2.5 ಎಕರೆ ಜಮೀನಿನಲ್ಲಿ ಭದ್ರತಾ ಗೋಡೆಯೊಂದಿಗೆ ಹೆಲಿಪ್ಯಾಡ್ ನಿರ್ಮಿಸುವ ವ್ಯವಸ್ಥೆ ಮಾಡಿದ್ದಾರೆ ಎಂಬುದು ವಿಶೇಷ. ಹೆಲಿಕಾಪ್ಟರ್ ನಿಲುಗಡೆ ಮಾಡಲು ಇಲ್ಲಿ ಗ್ಯಾರೇಜ್ ಇರಲಿದೆ. ಜೊತೆಗೆ ಪೈಲಟ್ ಹಾಗೂ ಟೆಕ್ನಿಶಿಯನ್’ಗಳ ಕೊಠಡಿಯೂ ಇರಲಿದೆ.

ಮಾರ್ಚ್ 15ರಂದು ಹೆಲಿಕಾಪ್ಟರ್ ಇಲ್ಲಿಗೆ ಬಂದು ತಲುಪಲಿದೆ ಎಂದು ಜನಾರ್ಧನ್ ಬೋಯಿರ್ ತಿಳಿಸಿದ್ದಾರೆ. ಜನಾರ್ಧನ್ ಬೋಯಿರ್ ಸುಮಾರು ನೂರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆಂದು ಎಂಬುದು ಗಮನಾರ್ಹ. ಜನಾರ್ಧನ್ ಬೋಯಿರ್ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಮಾತ್ರವಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಭಿವಂಡಿ ಪ್ರದೇಶದಲ್ಲಿ ದೊಡ್ಡ ದೊಡ್ಡ ಕಂಪನಿಗಳ ಗೋದಾಮುಗಳಿವೆ. ಆ ಗೋದಾಮುಗಳನ್ನು ಬಾಡಿಗೆಗೆ ನೀಡಿರುವವರು ದೊಡ್ಡ ಕಂಪನಿಗಳಿಂದ ಹೆಚ್ಚು ಬಾಡಿಗೆಯನ್ನು ಪಡೆಯುತ್ತಾರೆ. ಇದರಿಂದಾಗಿ ಈ ಪ್ರದೇಶದ ಹಲವು ಜನರು ಶ್ರೀಮಂತರಾಗಿದ್ದು, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಕಂಪನಿಗಳ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ. ಜನಾರ್ಧನ್ ಬೋಯಿರ್ ಸಹ ಹಲವಾರು ಗೋದಾಮುಗಳನ್ನು ಹೊಂದಿದ್ದು, ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *